ಹುಟ್ಟಿನಿಂದ ಎಲ್ಲರೂ
ನಾಸ್ತಿಕರು! ಸುತ್ತಮುತ್ತಲಿನವರೇ ಅವರನ್ನು ಆಸ್ತಿಕರನ್ನಾಗಿ ಮಾಡೋದು. ದೊಡ್ಡೋರಾಗ್ತಾ
ಆಗ್ತಾ ಕೆಲವರಿಗೆ ದೇವರೆಂಬ ಕಾನ್ಸೆಪ್ಟ್ ಅರ್ಥ ಆಗೋಲ್ಲ ಅಥವಾ ಇಷ್ಟ ಆಗೋಲ್ಲ ಅಥವಾ ತುಂಬಾ
ಪ್ರಾಕ್ಟಿಕಲ್ ಅನ್ಸೋಲ್ಲ. ಅವರೇ ನಾಸ್ತಿಕರಾಗೋದು ನನ್ನ ಪ್ರಕಾರ!. ಹೀಗೆ
ಯಾವಾಗಾದ್ರೂ ಫ್ರೆಂಡ್ಸ್ ಜೊತೆ ಕೂತು ಮಾತಾಡೋವಾಗ ಅಕಸ್ಮಾತಾಗಿ ನಾಸ್ತಿಕತೆಯ ವಿಷಯ
ಬರುತ್ತೆ. ಆವಾಗಲೇ ಈ argueಗಳು ಶುರುವಾಗೋದು. Argueಇಂದ ಯಾರ
opinionsನೂ change ಮಾಡೋಕಾಗಲ್ಲ ಅಂತ ಗೊತ್ತಿದ್ರು argue
ಮಾಡ್ತೀವಿ. Atheism ಅನ್ನೋದು argue topic ಆಗಿದ್ದಾಗ conversationnu ಹೆಂಗಿತ್ತು ಅಂತ ಬರ್ದಿದೀನಿ
ಇಲ್ಲಿ.
1) ದೇವರಿಲ್ಲ ಅಂತ ಪ್ರೂವ್ ಮಾಡು ನೋಡೋಣ !?
ಇಂಥ ಪ್ರಶ್ನೆ ಕೇಳೋರು ಒಂದು ಥರದ ವಿಶೇಷ ವಾನರ ಜಾತಿಗೆ ಸೇರಿದವರೆಂದು ನನ್ನ ಅನುಮಾನ (Dawn of the planet of the Apes is good movie, by the way). ಇರೋದನ್ನ ಇದೆ ಅಂತ ಪ್ರೂವ್ ಮಾಡ್ಬೋದು, ಇಲ್ದೆ ಇರೋದನ್ನ ಇಲ್ಲ ಅಂತ ಹೆಂಗೆ ಪ್ರೂವ್ ಮಾಡಬೇಕೋ ನಂಗಂತೂ ಗೊತ್ತಿಲ್ಲ! ದೇವರಿದ್ದಾನೆ ಅಂತ ಹೇಳ್ತಿರೋದು ನೀನು ಮಾರಾಯ, ಇದಾನೆ ಅಂತ ಪ್ರೂವ್ ಮಾಡೋದು ನಿನ್ನ ಕೆಲಸವಪ್ಪ, ನನ್ನದಲ್ಲ ಅಂತ ಹೇಳುವಷ್ಟರಲ್ಲಿ ನನ್ನ disposal cup ಖಾಲಿ!
2) ‘ನಾನು ಪ್ರೂಫ್ ಕೊಡ್ತೀನಿ, ನಮ್ಮ ಧಾರ್ಮಿಕ ಗ್ರಂಥದಲ್ಲಿ ಏನಿದೆ ಅಂದ್ರೆ.....’
ಸಮಾಧಾನ ಮಾಡ್ಕೋಪಾ. ನಿಮ್ಮ ಆ ಪುಸ್ತಕ ಆಕಾಶದಿಂದ ಉದುರಿ ಬಿದ್ದಿದ್ದು ಅಲ್ಲ. ಅದನ್ನು ಬರೆದಿದ್ದು ನನ್ನ ನಿನ್ನಂಥ ಮನುಷ್ಯನೇ. ಹಾಗಾಗಿ ಅದರಲ್ಲಿ ಇರೋದೆಲ್ಲ ಮನುಷ್ಯನ ಕಲ್ಪನೆಯಿಂದ ಬಂದಿದ್ದು ಅಷ್ಟೇ. ನೀನು ಏನು ಹೇಳ್ತಿದಿಯ ಅಂದ್ರೆ Batman ನಿಜವಾಗಲು ಇದಾನೆ ಏಕೆಂದರೆ ನೀನು Batman Comics ಓದಿದೀಯ!!
3) Universe, cosmos ನ ಸೃಷ್ಟಿ ಮಾಡಿರೋರು ಯಾರು? ನಿನ್ನ science ಯಾಕೆ ಉತ್ತರ ಕೊಡ್ತಿಲ್ಲ ಇದಕ್ಕೆ ?
ಒಂದಲ್ಲ ಒಂದು ದಿನ ವಿಜ್ಞಾನ ಇದಕ್ಕೆಲ್ಲ ಖಂಡಿತ ಉತ್ತರ ಕೊಡುತ್ತೆ. ವಿಜ್ಞಾನ ಎಂದಿಗೂ ನನಗೆಲ್ಲ ಗೊತ್ತು ಎಂದು ಯಾವತ್ತೂ ಹೇಳಿಲ್ಲ. (ಆ ಥರ ಹೇಳೋದು ಕೇವಲ Religion) . ಎವಿಡೆನ್ಸ್ ಅನ್ನೋದು ವಿಜ್ಞಾನದ ಅವಿಭಾಜ್ಯ ಅಂಗ. ವಿಜ್ಞಾನ ಉತ್ತರ ಹುಡುಕುತ್ತೆ. ಆದರೆ ವಿಜ್ಞಾನಕ್ಕೆ ‘ಗೊತ್ತಿಲ್ಲ’ ಅಂದ ತಕ್ಷಣ ನೀನು ಅಲ್ಲಿ ‘ದೇವರ’ನ್ನು ಅಲ್ಲಿ replace ಮಾಡೋ ಅಗತ್ಯವಿಲ್ಲ!! ಬರಿ ನೂರು ವರ್ಷದಲ್ಲಿ ವಿಜ್ಞಾನ ಸಾಕಷ್ಟು ಸಾಧಿಸಿದೆ, ಉತ್ತರಿಸಿದೆ. ಕಲ್ಲು ಮೇಲಿಂದ ಕೆಳಗೆ ಬೀಳೋದು ದೇವರ ಸೃಷ್ಟಿ ಅಂತ ಹೇಳಿದ್ದು ನೀವು. ಅದು Gravity ಅಂತ ಗೊತ್ತಾದ ಮೇಲೆ ಸುಮ್ಮನಾದಿರಿ. ಹಾಗೆ ಇದೂ ಕೂಡ!!!

4) ದೇವರನ್ನು ನಂಬದವನು ನೀನು, ನಿನಗೆ ಒಳ್ಳೆತನ, ಮಾನವೀಯತೆ ಏನು
ಎಂಬುದು ಗೊತ್ತೇ?
ನೀನು ಒಳ್ಳೆವನಾಗೋಕೆ
ದೇವರನ್ನು ನಂಬೋ ಅಗತ್ಯವಿಲ್ಲ ಕಣಯ್ಯಾ. ನಾನು ಎಷ್ಟು ಒಳ್ಳೆವನೋ ನಂಗಂತೂ ಗೊತ್ತಿಲ್ಲ. ಆದರೂ
ನಂಗೆ ಒಳ್ಳೆತನ, ಮಾನವೀಯತೆ ಏನೆಂದು ಗೊತ್ತಿದೆ. ಏಕೆಂದರೆ ಇದು ಗೊತ್ತಾಗೋದು ನನ್ನ Empathy ಇಂದ. Empathy ಅನ್ನೋದು ಮನುಷ್ಯನಿಗೆ
ಹುಟ್ಟಿನಿಂದ ಬರೋದು.
5) ದೇವರು ಮಾಡಿದ ಪವಾಡಗಳೆಲ್ಲ ಏನು? ಆ ಪವಾಡಗಳೆಲ್ಲ ಹೇಗೆ ನಡೆದವು ಮತ್ತೆ?
ನಾ ಆವಾಗಲೇ ಹೇಳಿದ್ನಲ್ಲೋ.
ಆ ಪವಾಡಗಳೆಲ್ಲ ಬರಿ ಪುಸ್ತಕದಲ್ಲಿ ಇರೋದು. ನಾ ಯಾಕೆ ನಂಬಬೇಕು ಅದನ್ನೆಲ್ಲ. ಅಲ್ಲಿ
ಬರೆದಿರೋದನ್ನ ನಂಬೋದು ನಿನ್ನ ಕರ್ಮ. Harry Potter ಪುಸ್ತಕದಲ್ಲಿರೋ ಪವಾಡಗಳೆಲ್ಲ ಅಷ್ಟೇ ರೋಚಕವಾಗಿದಾವೆ. ಹಾಗಂತ Harry Potter
ನಿಜವಾಗಿ ನಡೆದದ್ದು ಅಂತ ನಂಬ್ತೀಯ? ಏನ್ ಮಾತೂ ಅಂತ ಅಂತ ಆಡ್ತೀ ಮಾರಾಯ, ತಗೋ ಇನ್ನೊಂದ್ ಪೆಗ್ಗು.
ಕೊನೇದಾಗಿ, ನಾನು ದೇವರನ್ನು ದ್ವೇಷಿಸೋಲ್ಲ. Exist ಇಲ್ಲದ ಯಾವುದನ್ನೂ ನೀವು ದ್ವೇಷಿಸಲಾರಿರಿ.
This comment has been removed by the author.
ReplyDeleteಕಪಟವಿಲ್ಲದ ಜಾಣ ಬರವಣಿಗೆ :) Relativity of Comics ವಾದ ಮಾಡುವರನ್ನು ಮೂಕರನ್ನಾಗಿಸುತ್ತೆ!
ReplyDelete